ಪೈಲ್ವಾನ್ ರಿಲೀಸ್..ಶಿವಮೊಗ್ಗದಲ್ಲಿ ಕಿಚ್ಚನ ಕಟೌಟ್ಗೆ ಕ್ಷೀರಾಭಿಷೇಕ ಮಾಡಿದ ಅಭಿಮಾನಿಗಳು - ಕ್ಷೀರಾಭಿಷೇಕ
ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಪೈಲ್ವಾನ್ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ಶಿವಮೊಗ್ಗದ ಹಲವು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಕಿಚ್ಚನ ಅಭಿಮಾನಿಗಳು ಚಿತ್ರವನ್ನು ಅದ್ಧೂರಿಯಾಗಿ ಬರ ಮಾಡಿ ಕೊಂಡಿದ್ದಾರೆ. ನಗರದ ವೀರಭದ್ರೇಶ್ವರ ಚಿತ್ರ ಮಂದಿರದಲ್ಲಿ ಕಿಚ್ಚ ಸುದೀಪ್ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು, ಕ್ರೇನ್ ಮೂಲಕ ಬೃಹತ್ ಗಾತ್ರದ ಹಾರ ಹಾಕಿದರು. ಇನ್ನೊಂದೆಡೆ ತಮ್ಮ ನೆಚ್ಚಿನ ನಟನ ಚಿತ್ರ ಕನ್ನಡವಲ್ಲದೇ ಬಹು ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವುದಕ್ಕೆ ತೀವ್ರ ಸಂತಸ ವ್ಯಕ್ತಪಡಿಸಿದ ಅಭಿಮಾನಿಗಳು, ಚಿತ್ರ ಶತದಿನ ಪೂರೈಸಲಿ ಎಂದು ಹಾರೈಸಿದ್ದಾರೆ.