ಹೊಸಕೋಟೆಯಲ್ಲಿ ಕಾಂಗ್ರೆಸ್ಗೆ ಗೆಲುವು: ಕೈ ಅಭ್ಯರ್ಥಿ ಪದ್ಮಾವತಿ ಸುರೇಶ್ ವಿಶ್ವಾಸ - ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್
ಹೊಸಕೋಟೆ: ಉಪ ಚುನಾವಣೆ ಪ್ರಚಾರದ ವೇಳೆ ಉತ್ತಮ ಜನ ಬೆಂಬಲ ವ್ಯಕ್ತವಾಗುತ್ತಿದ್ದು, ಮಹಿಳೆಯರು, ವೃದ್ದರು ಸೇರಿದಂತೆ ಎಲ್ಲರೂ ಮತ ನೀಡುವ ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಹೇಳಿದ್ದಾರೆ. 1950ರಲ್ಲಿ ನಮ್ಮ ಅಜ್ಜಿ ಲಕ್ಷ್ಮೀದೇವಿ ರಾಮಣ್ಣ ಇಲ್ಲಿ ಶಾಸಕರಾಗಿದ್ದರು. 1970 ರಲ್ಲಿ ಮಾವ ಸೋಮಶೇಖರ್ ಇದೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಹೀಗಾಗಿ ನಾನು ವಲಸಿಗಳಲ್ಲ, ನಾನು ಈ ಕ್ಷೇತ್ರದ ಮನೆ ಮಗಳು ಎಂದು ಟೀಕಕಾರರಿಗೆ ತಿರುಗೇಟು ನೀಡಿದರು.