ಆಕ್ಸಿಜನ್ ಎಲ್ಲೂ ಸಿಗುತ್ತಿಲ್ಲ,ಇರೋ ಆಕ್ಸಿಜನ್ ಇವತ್ತು ಖಾಲಿಯಾಗುತ್ತೆ:ಸಚಿವ ಕೆ.ಸಿ.ನಾರಾಯಣಗೌಡ - ಆಕ್ಸಿಜನ್
ಮಂಡ್ಯ: ಆಕ್ಸಿಜನ್ ಕೊರತೆಯೇ ನಮ್ಮ ಮೇಜರ್ ಪ್ರಾಬ್ಲಂ ಆಗಿದೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ. ಆಕ್ಸಿಜನ್ ಎಲ್ಲೂ ಸಿಗುತ್ತಿಲ್ಲ. ಇದ್ದಂತಹ ಆಕ್ಸಿಜನ್ ಇವತ್ತು ಸಂಜೆವರೆಗೂ ಆಗಲಿದ್ದು, ಇನ್ಮುಂದೆ ಆಕ್ಸಿಜನ್ ಅಭಾವ ಎದುರಾಗಲಿದೆ. ಇವತ್ತು ರಾತ್ರಿ, ನಾಳೆಗೆ ಕಷ್ಟವಿದೆ. ಅದಕ್ಕಾಗಿ ಖುದ್ದು ಆಕ್ಸಿಜನ್ ಫ್ಯಾಕ್ಟರಿಗೆ ನಾನೇ ಹೋಗುತ್ತಿದ್ದೇನೆ. ಖುದ್ದು ಮೈಸೂರಲ್ಲೇ ಉಳಿದು ಆಕ್ಸಿಜನ್ ಸಪ್ಲೈ ಮಾಡ್ತೇವೆ. ಇಂದು ಚಾಮರಾಜನಗರದ ಸ್ಥಿತಿ ಮಂಡ್ಯಕ್ಕೆ ಬಾರದಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.