ಮೈ ಝುಮ್ಮೆನಿಸಿದ ಹೋರಿ ಬೆದರಿಸೋ ಸ್ಪರ್ಧೆ..ಕಿಕ್ಕಿರಿದು ಸೇರಿದ ಜನ - ಹಾವೇರಿ ಹೋರಿ ಬೆದರಿಸೋ ಸ್ಪರ್ಧೆ
ಅಲ್ಲಿ ಜನ್ರ ದಂಡೇ ನೆರೆದಿತ್ತು. ಅವರೆಲ್ಲ ರಾಸುಗಳ ಮಿಂಚಿನ ಓಟ ನೋಡಲು ಮನೆಯ ಚಾವಣಿ ಮೇಲೆಯೂ ಕುಳಿತಿದ್ರು. ಇತ್ತ ಅಖಾಡದಲ್ಲಿ ಹೋರಿಗಳನ್ನು ಓಡಿಸುವವರು ಕೇಕೆ ಹಾಕುತ್ತ ಬಂದರೆ ಅವುಗಳನ್ನೇ ಹಿಡಿದೇ ತೀರುವೆವು ಅಂತ ಟೊಂಕಕಟ್ಟಿ ನಿಂತಿದ್ದ ಜನರ ಗುಂಪು... ಒಂದಕ್ಕಿಂತ ಒಂದು ಹೆಚ್ಚು ಅನ್ನೋ ಥರ ಹಿಡಿಯೋಕೆ ಬಂದವರ ಮೇಲೆ ನುಗ್ಗುತ್ತಿದ್ದ ಹೋರಿಗಳ ಆರ್ಭಟ ಗಮನ ಸೆಳೆಯಿತು.