ಜೋರು ಮಳೆ,ಸಿಡಿಲು ಬಡಿದು ಎತ್ತು ಸಾವು - heavy rain in raichur
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕು ಮುದಗಲ್ಲ ಹೋಬಳಿ ಕೆ. ಮರಿಯಮ್ಮನಹಳ್ಳಿಯಲ್ಲಿ ಇಂದು ಸಂಜೆ ಸಿಡಿಲು ಬಡಿದು ಎತ್ತು ಮೃತಪಟ್ಟಿದೆ. ಮೃತಪಟ್ಟಿರುವ ಎತ್ತು ಬಾಲಸ್ವಾಮಿ ಪ್ರಕಾಶಪ್ಪ ಎಂಬ ರೈತನಿಗೆ ಸೇರಿದ್ದಾಗಿದೆ. ಕೃಷಿ ಚಟುವಟಿಕೆ ಮುಗಿಸಿ ಜಮೀನಿನಲ್ಲಿ ಕಟ್ಟಿ ಹಾಕಿದ್ದ ಸಮಯದಲ್ಲಿ ಈ ಘಟನೆ ಜರುಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತಾಲೂಕಿನ ಸರ್ಜಾಪುರ, ಹೆಸರೂರ, ಅಮರಾವತಿ, ಕುಪ್ಪಿಗುಡ್ಡ ಸೇರುದಂತೆ ಇತರೆಡೆಗಳಲ್ಲಿ ಆಲಿಕಲ್ಲು ಸಮೇತ ಧಾರಾಕಾರ ಮಳೆ ಆಗಿದೆ.