ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿ...ಪ್ರವಾಹದಲ್ಲಿ ಸಿಲುಕ್ಕಿದ್ದ ತಂದೆ-ಮಗನ ರಕ್ಷಣೆ - Protection of father-son who was caught in a flood
ಬಾಗಲಕೋಟೆ: ಜಿಲ್ಲೆಯ ಘಟಪ್ರಭಾ ನದಿ ನೀರು ತುಂಬಿ ಹರಿಯುತ್ತಿದ್ದು, ಮುಧೋಳ ತಾಲೂಕಿನಲ್ಲಿ ಪ್ರವಾಹ ಭೀತಿ ಉಂಟಾಗಿದೆ. ವಿಜಯಪುರ, ಧಾರವಾಡ,ಬೆಳಗಾವಿ ಪ್ರಮುಖ ಸೇತುವೆ ಮುಳಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಚಿಚಖಂಡಿ ಸೇತುವೆ ಮುಳಗಡೆ ಹಿನ್ನೆಲೆ, ಸೇತುವೆ ಆಚೆಗೆ ತಂದೆ ಮಗ ಜಾನುವಾರುಗಳ ತರಲು ಹೋಗಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಪ್ರವಾಹದಲ್ಲಿ ಸಿಲುಕಿಕೊಂಡ ತಂದೆ-ಮಗನನ್ನ ರಾಜ್ಯ ವಿಪತ್ತು ನಿರ್ವಹಣಾ ತಂಡ ಕಾರ್ಯಾಚರಣೆ ನಡೆಸಿ, ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಈಟಿವಿ ಭಾರತ್ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.