ಸೊನ್ನ ಬ್ಯಾರೇಜ್ನಿಂದ 5 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬಿಡುಗಡೆ..ಗ್ರಾಮಗಳ ಮುಳುಗಡೆ ಭೀತಿ - ಗ್ರಾಮಗಳ ಮುಳುಗಡೆ ಭೀತಿ
ಕಲಬುರಗಿಯ ಭೀಮಾನದಿಯಲ್ಲಿ ಭಾರಿ ಪ್ರವಾಹವುಂಟಾಗಿದೆ. ಮಹಾರಾಷ್ಟ್ರದ ಉಜನಿ, ವೀರ್ ಜಲಾಶಯದಿಂದ ಹಾಗೂ ನಳದುರ್ಗ ಬಳಿಕ ಡ್ಯಾಮ್ ಒಡೆದು ಸೊನ್ನ ಬ್ಯಾರೇಜ್ಗೆ 5 ಲಕ್ಷ 11 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರು ಭೀಮಾ ನದಿಗೆ ಹರಿ ಬಿಡಲಾಗಿದೆ. ಇದರಿಂದಾಗಿ ಅಫಜಲಪುರ, ಜೇವರ್ಗಿ, ಕಲಬುರಗಿ, ಚಿತ್ತಾಪುರ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಸೃಷ್ಟಿಯಾಗುತ್ತಿದೆ. ಈ ಕುರಿತಾಗಿ ನಮ್ಮ ಪ್ರತಿನಿಧಿಯ ಪ್ರತ್ಯಕ್ಷ ವರದಿ ಇಲ್ಲಿದೆ.