ಸರ್ಕಾರದ ಹೊಸ ಕೊರೊನಾ ಮಾರ್ಗಸೂಚಿಗೆ ಜಿಮ್ ಮಾಲೀಕರ ಸಂಘ ಆಕ್ರೋಶ - Karnataka covid Guidelines
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಹಿನ್ನೆಲೆ ಸರ್ಕಾರವು ಕೆಲ ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಾರ್ಗಸೂಚಿಯಲ್ಲಿನ ಜಿಮ್ ಬಂದ್ ಮಾಡುವ ವಿಚಾರಕ್ಕೆ ಜಿಮ್ ಮಾಲೀಕರ ಸಂಘದ ಪದಾಧಿಕಾರಿ ಶರಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಬ್, ಬಾರ್, ರೆಸ್ಟೋರೆಂಟ್ಗಳಿಗೆ ಶೇ. 50ರಷ್ಟು ಅನುಮತಿ ನೀಡಲಾಗಿದೆ. ಆದರೆ ಜಿಮ್, ಸ್ವಿಮ್ಮಿಂಗ್ ಫೂಲ್ಗಳಿಗೆ ಮಾತ್ರ ಸಂಪೂರ್ಣ ಸ್ಥಗಿತಗೊಳಿಸುವಂತೆ ಹೇಳಿರುವುದು ತಪ್ಪು. ಜಿಮ್ಗಳಿಂದ ಸರ್ಕಾರಕ್ಕೆ ಯಾವುದೇ ಲಾಭ ಆಗಲ್ಲ, ಹೀಗಾಗಿ ಬಂದ್ ಮಾಡಲು ಆದೇಶಿಸಲಾಗಿದೆ. ವ್ಯಾಯಾಮ ಮಾಡಿ ಎಂದು ನೀವೇ ಹೇಳುತ್ತೀರಾ, ಈಗ ನೀವೇ ಹೀಗೆ ಮಾಡಿದರೆ ಹೇಗೆ? ಜಿಮ್ ತೆರೆಯದಿದ್ದರೆ ಮಾಲೀಕರು ಬೀದಿಗೆ ಬರಬೇಕಾಗುತ್ತದೆ. ದಯವಿಟ್ಟು ನಮಗೂ ಶೇಕಡ 50ರಷ್ಟು ಅವಕಾಶ ನೀಡಿ ಎಂದು ಶರಣ್ ಮನವಿ ಮಾಡಿದ್ದಾರೆ.