ಕರ್ನಾಟಕ

karnataka

ETV Bharat / videos

ಜೆಡಿಎಸ್​ ಯಾವುದೇ ಪಕ್ಷದ ಜೊತೆ ವಿಲೀನವಾಗಲ್ಲ: ಶಾಸಕ ಸುರೇಶ್ ಗೌಡ

By

Published : Dec 27, 2020, 3:20 PM IST

ಮಂಡ್ಯ: ನಮ್ಮ ಜೆಡಿಎಸ್ ಪಕ್ಷ ಯಾವುದೇ ಪಕ್ಷದ ಜೊತೆ ವಿಲೀನವಾಗಲ್ಲ. ಆದರೆ ವಿಷಯಾಧಾರಿತವಾಗಿ ಯಾರನ್ನಾದರೂ ಬೆಂಬಲಿಸಬಹುದು ಅಷ್ಟೇ ಎಂದು ಶಾಸಕ ಸುರೇಶ್ ಗೌಡ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮಾಜಿ ಮುಖ್ಯಮಂತ್ರಿಗಳು ಇದಕ್ಕೆಲ್ಲಾ ಸ್ಪಷ್ಟೀಕರಣ ಕೊಟ್ಟಿದ್ದಾರೆ. ನಾವು ಎಲ್ಲೂ ಪಕ್ಷವನ್ನು ವಿಲೀನ ಮಾಡುತ್ತೀವಿ ಅಂತಾ ಹೇಳಿಲ್ಲ. ಇದೆಲ್ಲಾ ಸೃಷ್ಟಿ ಅಷ್ಟೇ. ಯಾವುದೇ ಕಾರಣಕ್ಕೂ ವಿಲೀನವಾಗಲ್ಲ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್​ನವರು ಈ ವಿಲೀನದ ವಿಚಾರವನ್ನು ಶುರು ಮಾಡಿರುವುದು. ಕಾಂಗ್ರೆಸ್​ನವರಿಗೆ ಎಲ್ಲೋ ಸ್ವಲ್ಪ ನೋವಾಗ್ತಿರಬಹುದು. ಒಂದು ಕಡೆ ಈ ಪಕ್ಷವನ್ನು ಸಂಪೂರ್ಣವಾಗಿ ಮುಗಿಸುವ ತೀರ್ಮಾನದಲ್ಲಿದ್ದಾರೆ. ಅದಕ್ಕೆ ಈ ತರಹದ ಕತೆಗಳನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು. ಜೆಡಿಎಸ್​​ನವರು ಎಲ್ಲಾ ಒಗ್ಗಟ್ಟಾಗಿದ್ದೇವೆ. ನಮ್ಮ ವರಿಷ್ಠರು ಹಾಗೂ ಕುಮಾರಸ್ವಾಮಿಯವರ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದರು.

ABOUT THE AUTHOR

...view details