ಸರ್ಕಾರಿ ಶಾಲೆಯ ಹಿರಿಮೆ ಹೆಚ್ಚಿಸಿದ ಅನಾಥೆ ಬಾಲಕಿಗೆ IAS ಕನಸು: ಚಿಟ್‌ಚಾಟ್ ವೀಕ್ಷಿಸಿ
ಬಳ್ಳಾರಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಳ್ಳಾರಿಯ ಬಾಲಮಂದಿರದ ಅನಾಥ ಬಾಲಕಿಯೊಬ್ಬಳು ವಿಶೇಷ ಸಾಧನೆ ಮಾಡಿದ್ದು ಸರ್ಕಾರಿ ಶಾಲೆಯ ಟಾಪರ್ ಆಗಿ ಹೊರ ಹೊಮ್ಮಿದ್ದಾಳೆ. ತಾಲೂಕಿನ ಮೋಕಾ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಶ್ರೀದೇವಿ ಈ ಸಾಧನೆ ಮಾಡಿದವಳು. ಈಕೆ 625ಕ್ಕೆ 572 (ಶೇ.92) ಅಂಕ ಗಳಿಸಿದ್ದಾಳೆ. ಕನ್ನಡದಲ್ಲಿ 124, ಇಂಗ್ಲಿಷ್ 98, ಹಿಂದಿ 92, ಗಣಿತ 87, ವಿಜ್ಞಾನ 76, ಸಮಾಜ ವಿಜ್ಞಾನದಲ್ಲಿ 95 ಅಂಕ ಪಡೆದಿದ್ದು, IAS ಅಧಿಕಾರಿಯಾಗುವ ಕನಸು ಹೊತ್ತಿದ್ದಾಳೆ. ಪ್ರತಿಭಾವಂತ ವಿದ್ಯಾರ್ಥಿನಿ ಜತೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್ ಚಾಟ್ ಇಲ್ಲಿದೆ ನೋಡಿ...