ಕೃಷಿ ಕಾಯ್ದೆ ಹಿಂಪಡೆಯಬೇಕು, ಕೇಂದ್ರದ ವಿರುದ್ಧ ಗುಡುಗಿದ ಉಧಾನ್ ವೆಲ್ಪೇರ್ ಅಧ್ಯಕ್ಷೆ - ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು
72ನೇ ಗಣರಾಜ್ಯೋತ್ಸವವನ್ನು ನಗರದ ಚನ್ನಮ್ಮ ವೃತ್ತದಲ್ಲಿ ಉಧಾನ್ ವೆಲ್ಪೇರ್ ಅಸೋಸಿಯೇಷನ್ ಸಂಘಟನೆಯಿಂದ ವಿಶೇಷವಾಗಿ ಆಚರಣೆ ಮಾಡಲಾಯಿತು. ನಂತರ ಮಾತನಾಡಿದ ಸಂಘಟನೆಯ ಅಧ್ಯಕ್ಷೆ ಬತುಲ್ ಕಿಲ್ಲೇದಾರ್, ಇದು ಭಾರತ ಕಂಡ ಅಭೂತಪೂರ್ವ ದಿನವಾಗಿದ್ದು ಎಲ್ಲರೂ ಒಗ್ಗೂಡಿ ಆಚರಣೆ ಮಾಡುತ್ತಾರೆ. ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ರೈತರು ಹೋರಾಟ ಮಾಡುತ್ತಿದ್ದು, ಬಹಳ ನೋವು ತಂದಿದೆ. ರೈತರು ದೇಶಕ್ಕೆ ಅನ್ನ ನೀಡುವವರು ಅದೇ ಅನ್ನದಾತ ಇವತ್ತು ಹೋರಾಟ ಮಾಡುವ ಪ್ರಸಂಗ ಬಂದಿದೆ. ಅದಕ್ಕೆ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು, ಇಲ್ಲವಾದರೆ ಸರ್ಕಾರ ಉರುಳುವುದು ಗ್ಯಾರಂಟಿ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.