ಶಿರಸಿ: ಸಾವಯವ ಕೃಷಿಯ ಪ್ರತೀಕ ಈ ಜೋಯಿಡಾದ ಗೆಡ್ಡೆ-ಗೆಣಸಿನ ಮೇಳ! - ಸಂಕ್ರಾಂತಿ ಹಬ್ಬ
ಉತ್ತರ ಕನ್ನಡ ಜಿಲ್ಲೆಯ ಹಿಂದುಳಿದ ಪ್ರದೇಶ ಎನಿಸಿಕೊಂಡಿರುವ ಜೋಯಿಡಾ ಇತ್ತೀಚಿಗೆ ಮಾತ್ರ ಗೆಡ್ಡೆ-ಗೆಣಸುಗಳಿಂದ ಎಲ್ಲ ಕಡೆ ಫೆಮಸ್ ಆಗುತ್ತಿದೆ. ಗೆಡ್ಡೆ ಗೆಣಸು ಬೆಳೆಯುವುದರ ಜೊತೆಗೆ ಅದರ ಮೇಳವನ್ನು ಮಾಡಿ, ಬರೋಬ್ಬರಿ 150 ಜಾತಿಯ ಗಡ್ಡೆ-ಗೆಣಸುಗಳನ್ನು ಜನರಿಗೆ ಪರಿಚಯಿಸುವ ಕೆಲಸವೂ ನಡೆಯುತ್ತಿದೆ. ಸಂಕ್ರಾಂತಿ ಹಬ್ಬಕ್ಕೂ ಮೊದಲು ನಡೆಯುವ ಈ ಗೆಡ್ಡೆ-ಗೆಣಸಿನ ಮೇಳದಲ್ಲಿ ಸಾವಿರಾರು ಜನರು ಪಾಲ್ಗೊಂಡು ಖರೀದಿಸುವುದರ ಜೊತೆಗೆ ಸಾವಯವ ಕೃಷಿಯತ್ತ ತಮ್ಮ ಆಸಕ್ತಿಯನ್ನ ತೋರಿದ್ದಾರೆ.