ಕಾರವಾರದ ಕಡಲ ತೀರದಲ್ಲಿ ತಟರಕ್ಷಕ ದಳದ ಕಚೇರಿ: ಸ್ಥಳೀಯರಿಂದ ತೀವ್ರ ವಿರೋಧ - Opposition to the construction of a Cost Guard Office at Karawara
ಕಾರವಾರ: ಕಡಲ ನಗರಿ ಕಾರವಾರ ಪ್ರವಾಸಿಗರ ಪಾಲಿನ ಸ್ವರ್ಗ. ಇಲ್ಲಿನ ಹತ್ತಾರು ಕಡಲ ತೀರಗಳು ಪ್ರತಿನಿತ್ಯ ನೂರಾರು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಅದರಂತೆ ನಗರದ ರವೀಂದ್ರನಾಥ್ ಟ್ಯಾಗೋರ್ ಕಡಲ ತೀರ ಕೂಡ ಒಂದಾಗಿದ್ದು, ಇಲ್ಲಿನ ಸಾಂಪ್ರದಾಯಿಕ ಮೀನುಗಾರಿಕೆ, ಜಲಸಾಹಸಿ ಕ್ರೀಡೆಗಳು ಪ್ರವಾಸಿಗರ ಮೋಜು ಮಸ್ತಿಯ ತಾಣವಾಗಿ ರೂಪುಗೊಂಡಿದೆ. ಆದರೆ ಇದೀಗ ಈ ಕಡಲ ತೀರದಲ್ಲಿ ಭಾರತೀಯ ತಟರಕ್ಷಕ ದಳದ ಹೋವರ್ ಕ್ರಾಪ್ಟ್ ನಿಲುಗಡೆ ಜಾಗ ನೀಡಿದ್ದು, ಮೀನುಗಾರರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.