ಕೆಎಸ್ಆರ್ಟಿಸಿ ಬಸ್ ದರ ಏರಿಕೆ ಬಗ್ಗೆ ಆಮ್ ಆದ್ಮಿ ಮುಖಂಡ ಆಕ್ರೋಶ - ಬಸ್ ದರ ಏರಿಕೆ ಕುರಿತು ವಿಪಕ್ಷಗಳು ಹಾಗೂ ಜನಸಾಮಾನ್ಯರಿಂದ ಟೀಕೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆ.ಎಸ್.ಆರ್.ಟಿ.ಸಿ)ದ ಬಸ್ ದರವನ್ನು ಶೇಕಡಾ 12ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಿರುವ ಸರ್ಕಾರದ ನಿರ್ಧಾರಕ್ಕೆ ವಿಪಕ್ಷಗಳು ಹಾಗೂ ಜನಸಾಮಾನ್ಯರಿಂದ ಟೀಕೆಗಳು ಕೇಳಿಬಂದಿವೆ. ಜನಸಾಮಾನ್ಯರು ಅಗತ್ಯದ ಪ್ರಯಾಣಕ್ಕೆ ಕೆ.ಎಸ್ಆರ್ಟಿಸಿಯನ್ನೇ ನೆಚ್ಚಿಕೊಂಡಿದ್ದಾರೆ. ಆದ್ರೆ, ಸರ್ಕಾರಕ್ಕೆ ಜನರ ಮೇಲೆ ಯಾವುದೇ ಕಾಳಜಿ ಇಲ್ಲ ಎಂಬುದು ಈ ಮೂಲಕ ಗೊತ್ತಾಗಿದೆ. ಆಮ್ ಆದ್ಮಿ ಪಕ್ಷ ಇದನ್ನು ತೀವ್ರವಾಗಿ ಖಂಡಿಸಿ, ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಆ ಪಕ್ಷದ ಮುಖಂಡ ಜಗದೀಶ್ ತಿಳಿಸಿದರು. ಇನ್ನು ಏಕಾಏಕಿ ಬಸ್ ದರ ಏರಿಕೆ ಮಾಡಿ, ಬಡ ಜನರಿಗೆ ಕೆಎಸ್ಆರ್ಟಿಸಿ ತೊಂದರೆ ಮಾಡಿದೆ ಎಂದು ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಕೂಡೆ ಆಕ್ರೋಶ ವ್ಯಕ್ತಪಡಿಸಿದರು.