ಕರ್ನಾಟಕ

karnataka

ETV Bharat / videos

ಸರ್ಜರಿ ಲೈವ್​ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದ ಕಣಚೂರು ಆಸ್ಪತ್ರೆ - ಕಣಚೂರು ಆಸ್ಪತ್ರೆ

🎬 Watch Now: Feature Video

By

Published : Jan 31, 2020, 4:50 PM IST

ಮಂಗಳೂರಿನ ನಾಟಿಕಲ್​ನಲ್ಲಿರುವ ಕಣಚೂರು ಆಸ್ಪತ್ರೆಯಲ್ಲಿ ಜ.6 ರಿಂದ 17 ರವರೆಗೆ ನಡೆದ ಶಸ್ತ್ರಚಿಕಿತ್ಸೆ ಕಾರ್ಯಾಗಾರದಲ್ಲಿ 21 ಪ್ರಕರಣಗಳ ಸರ್ಜರಿ ನಡೆಸಲಾಗಿದ್ದು, ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳಿಗೆ ಸರ್ಜರಿ ಕಾರ್ಯಗಳನ್ನು ಲೈವ್ ಆಗಿ ಆಪರೇಷನ್ ಥಿಯೇಟರ್ ಪಕ್ಕದ ಸೆಮಿನಾರ್ ಕೋಣೆಯಲ್ಲಿ ನೋಡುವ ಅವಕಾಶ ಒದಗಿಸಲಾಗಿತ್ತು. ಸೀಳು ತುಟಿ, ತಲೆ ಬುರುಡೆ, ಕುತ್ತಿಗೆ, ಹುಟ್ಟುತ್ತಲೇ ಬಂದ ಮುಖದ ಸಮಸ್ಯೆಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಲಾಯಿತು. ಬಡರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇವಲ ಔಷಧ ಖರ್ಚುಗಳನ್ನು ಮಾತ್ರ ಪಾವತಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ 21 ಮಂದಿ ಈ ಶಸ್ತ್ರಚಿಕಿತ್ಸೆಯ ಪ್ರಯೋಜನ ಪಡೆದ್ರು.

ABOUT THE AUTHOR

...view details