ಬೆಳಗಾವಿಯ ಆಪರೇಷನ್ ಬೃಹತ್ ಬಂಡೆ ಯಶಸ್ವಿ! - Belagavi news
ಆ ಎರಡು ಜೋಡಿ ಬಂಡೆಗಲ್ಲು ಕಳೆದ ಮೂರು ದಿನಗಳಿಂದ ಒಂದು ಇಡೀ ನಗರದ ಜನರ ನಿದ್ದೆಗೆಡಸಿದ್ದವು. ಗುಡ್ಡದ ಕೆಳ ಪ್ರದೇಶದ ಸಾವಿರಾರು ಜನರು ಹಗಲು ರಾತ್ರಿ ಆತಂಕದಲ್ಲೇ ದಿನ ದೂಡುತ್ತಿದ್ರು. ಬಂಡೆಗಲ್ಲಿಗೆ ಮುಕ್ತಿ ಕೊಡಿಸಲು ಕಳೆದ ಮೂರು ದಿನಗಳಿಂದ ನಲವತ್ತು ಸಿಬ್ಬಂದಿ ಆಪರೇಷನ್ ಬಂಡೆ ಕಾರ್ಯಾಚರಣೆ ನಡೆಸಿದ್ದರು. ಇಂದು ಆಪರೇಷನ್ ಕಾರ್ಯ ಸಕ್ಸಸ್ ಆಗಿದ್ದು, ಅಲ್ಲಿನ ಜನ್ರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.