ಕೊಪ್ಪಳದಲ್ಲಿ ಆಪರೇಷನ್ ಕರಡಿ: ಅರಣ್ಯ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾನೆ ಜಾಂಬವಂತ! - ಕರಡಿ
ಕೊಪ್ಪಳ: ತಾಲೂಕಿನ ಚಿಕ್ಕಬಗನಾಳ ಗ್ರಾಮದ ಶೇಷಪ್ಪ ಹಾಗೂ ರಾಮಪ್ಪ ಎಂಬುವವರ ಬಾಳೆ ತೋಟದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿತ್ತು. ಈ ಕುರಿತಂತೆ ರೈತರು ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಉಪ ಅರಣ್ಯಾಧಿಕಾರಿಗಳು ಬಾಳೆ ತೋಟದಲ್ಲಿ ಪ್ರತ್ಯಕ್ಷವಾಗಿರುವ ಕರಡಿ ಸೆರೆ ಹಿಡಿಯಲು ಹರಸಾಹಸಪಡುತ್ತಿದ್ದಾರೆ. ಜನರು ಸಹ ಅಲ್ಲಿ ನೆರೆದಿರುವುದರಿಂದ ಕರಡಿ ಬಾಳೆ ತೋಟ ಬಿಟ್ಟು ಹೊರಗೆ ಬರುತ್ತಿಲ್ಲ. ಒಂದು ಬಾರಿ ಬಾಳೆ ತೋಟದಿಂದ ಹೊರಬಂದು ಕರ್ಕಿಹಳ್ಳಿ ಕಡೆಗೆ ಓಡಿ ಹೋಗಿ ಮತ್ತೆ ಬಾಳೆ ತೋಟದಲ್ಲಿ ಅವಿತುಕೊಂಡಿದೆ. ಈ ಮೂಲಕ ಜಾಂಬವಂತ ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾನೆ.
Last Updated : Apr 24, 2021, 8:08 PM IST