ಪುಷ್ಪ ಪ್ರದರ್ಶನದಲ್ಲಿ ಕೊರೊನಾ ಕುರಿತು ಜಾಗೃತಿ: ವಿಡಿಯೋದಲ್ಲೇ ಕಣ್ತುಂಬಿಕೊಳ್ಳಿ ಹೂಗಳ ಚೆಲುವಿನ ಚಿತ್ತಾರ
ಗುಂಡ್ಲುಪೇಟೆ: ನೆರೆಯ ರಾಜ್ಯ ತಮಿಳುನಾಡಿನ ಊಟಿಯಲ್ಲಿ ಪ್ರತಿ ವರ್ಷ ಮೇ ತಿಂಗಳಲ್ಲಿ ಪುಷ್ಪ ಪ್ರದರ್ಶನ ನಡೆಯುತ್ತದೆ. ಲಕ್ಷಾಂತರ ಪ್ರವಾಸಿಗರು ಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಈ ವರ್ಷದ ಪುಷ್ಪ ಪ್ರದರ್ಶನ ಈಗಾಗಲೇ ಸಿದ್ಧಗೊಂಡಿದೆ. ಆದರೆ ಕೊರೊನಾ ಹಿನ್ನೆಲೆ ಸಿಬ್ಬಂದಿಯ ಶ್ರಮ ವ್ಯರ್ಥ ಆಗಬಾರದು, ಪ್ರವಾಸಿಗರು ಇದನ್ನು ನೋಡಬೇಕು ಎಂದು ತೋಟಗಾರಿಕೆ ಇಲಾಖೆ ಸಿದ್ಧಪಡಿಸಿರುವ ಪುಷ್ಪಗಳನ್ನು ಚಿತ್ರೀಕರಿಸಿ ವಿಡಿಯೋ ಮತ್ತು ಆಲ್ಬಂ ರೂಪದಲ್ಲಿ ಬಿಡುಗಡೆ ಮಾಡಲು ಚಿಂತಿಸಿದೆ. ಈಗಾಗಲೇ 40 ಸಾವಿರ ವಿವಿಧ ಜಾತಿಯ ಹೂ, ಕುಂಡಗಳನ್ನು ಜೋಡಿಸಲಾಗಿದೆ. ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಚಿತ್ರವನ್ನು ಸಹ ವಿವಿಧ ಹೂ ಕುಂಡಗಳನ್ನು ಬಳಸಿ ರಚಿಸಲಾಗಿದ್ದು, ಮನೆಯಲ್ಲಿಯೇ ಸುರಕ್ಷಿತವಾಗಿರಿ ಎಂಬ ಸಂದೇಶ ಸಾರಲಾಗುತ್ತಿದೆ.