ಆನ್‌ಲೈನ್ ಮೂಲಕ 1,584 ಗಂಟೆಗಳ ಪಾಠ; ತುಮಕೂರು ವಿವಿ ಉಪನ್ಯಾಸಕರ ಪ್ರಯತ್ನ - tumkuru university
ತುಮಕೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಮಾಡಲಾಗದೆ ಉಳಿದ ಪಾಠಗಳನ್ನು ಉಪನ್ಯಾಸಕರು ಆನ್‌ಲೈನ್ ಮೂಲಕ ಮುಂದುವರಿಸಿದ್ದಾರೆ. ಮಾರ್ಚ್ 25ರಿಂದ ಏಪ್ರಿಲ್ 7 ರವರೆಗೆ 1,584 ಗಂಟೆಗಳ ಕ್ಲಾಸ್ ಅಂತರ್ಜಾಲದ ಮೂಲಕ ನಡೆದಿದೆ. ವಿದ್ಯಾರ್ಥಿಗಳು ಈ ತರಗತಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಪದವಿ, ಸ್ನಾತಕೋತ್ತರ ಪದವಿಯ 25 ವಿಭಾಗಗಳ ಉಪನ್ಯಾಸಕರು ಆನ್ಲೈನ್ನಲ್ಲಿ ಪಾಠ ಹೇಳಿಕೊಟ್ಟಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ತೊಂದರೆಯಾಗಬಾರದು ಅನ್ನೋದು ವಿಶ್ವವಿದ್ಯಾನಿಲಯ ಉದ್ದೇಶ.