ಈರುಳ್ಳಿ ರಫ್ತು ನಿರ್ಬಂಧ: ಕೇಂದ್ರ ಸರ್ಕಾರದ ವಿರುದ್ಧ ಗದಗ ಭಾಗದ ರೈತರ ಅಸಮಾಧಾನ... - ಗದಗ ಈರುಳ್ಳಿ ರಫ್ತು ನಿರ್ಬಂಧ ಸುದ್ದಿ 2020
ಕೇಂದ್ರ ಸರ್ಕಾರ ತಕ್ಷಣದಿಂದಲೇ ಜಾರಿಯಾಗುವಂತೆ ಈರುಳ್ಳಿ ರಫ್ತು ಬ್ಯಾನ್ ಮಾಡಿದ್ದನ್ನು ಜಿಲ್ಲೆಯ ರೈತರು ಖಂಡಿಸಿದ್ದಾರೆ. ಕೇಂದ್ರ ಸರ್ಕಾರದ ತಗೆದುಕೊಂಡ ನಿರ್ಧಾರ ರೈತ ವಿರೋಧಿ ನಿರ್ಧಾರವಾಗಿದೆ. ಹೀಗಾದರೆ ನಾವು ಬದುಕೋದು ಹೇಗೆ? ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಲ ಸೂಲ ಮಾಡಿ ಎಕರೆಗೆ 30 ಸಾವಿರ ಖರ್ಚು ಮಾಡಿ ಸಾಕಷ್ಟು ಸಂಕಷ್ಟದ ನಡುವೆ ಈರುಳ್ಳಿ ಬೆಳೆದಿದ್ದರಿಂದ, ಉತ್ತಮ ಮಳೆಯಾಗಿ ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಕೇಂದ್ರ ಸರ್ಕಾರ ಆಘಾತವನ್ನುಂಟು ಮಾಡಿದೆ. ಗ್ರಾಹಕರ ಹಿತದೃಷ್ಟಿಯಿಂದ ರಫ್ತು ನಿಷೇಧ ಮಾಡಿದ್ದರೆ, ಕೂಡಲೇ ಕೇಂದ್ರ ಸರ್ಕಾರ ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಹಾಗೂ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.