ಕರ್ನಾಟಕ

karnataka

ETV Bharat / videos

ಬೆಂಗಳೂರು: ಒಂದು ವಾರದ ಲಾಕ್​ಡೌನ್ ಇಂದಿಗೆ ಅಂತ್ಯ - ಬೆಂಗಳೂರು ಲಾಕ್​ಡೌನ್

By

Published : Jul 21, 2020, 1:09 PM IST

ಬೆಂಗಳೂರು: ಕೊರೊನಾ ತಡೆಗಟ್ಟಲು ಹೇರಿರುವ ಒಂದು ವಾರದ ಲಾಕ್​ಡೌನ್ ಇಂದಿಗೆ ಅಂತ್ಯವಾಗುತ್ತದೆ‌. ನಾಳೆ ಮುಂಜಾನೆ 5 ಗಂಟೆಯ ನಂತರ ಜನರು ಎಂದಿನಂತೆ ನಗರದಲ್ಲಿ ತಮ್ಮ ಕೆಲಸಕ್ಕೆ ಓಡಾಟ ಮಾಡಬಹುದು. ಸದ್ಯ ಲಾಕ್​ಡೌನ್ ಇದ್ದರೂ ಜನರು ಅಗತ್ಯ ಸೇವೆಯ ನೆಪದಲ್ಲಿ ಓಡಾಟ ಮಾಡ್ತಿದ್ದಾರೆ. ಲಾಕ್​ಡೌನ್ ಕುರಿತು ಸಾರ್ವಜನಿಕರು ಈ ಟಿವಿ ಭಾರತದ ಜೊತೆ ಮಾತನಾಡಿ ಒಂದು ವಾರದ ಲಾಕ್​ಡೌನ್​ನಿಂದ ಕೊರೊನಾ ಸೋಂಕಿನ ಸಂಖ್ಯೆ ಕೊಂಚ ಮಟ್ಟಿಗೆ ಕಡಿಮೆಯಾಗಿದೆ. ಆದರೆ, ಸರ್ಕಾರದ ನಾಯಕರು ನಾಟಕವಾಡುವುದು ಅಲ್ಲ, ಇನ್ನಾದರೂ ಎಚ್ಚೆತ್ತು ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಬೇಕು ಎಂದಿದ್ದಾರೆ.

ABOUT THE AUTHOR

...view details