ಶಾಸಕರ ಸಮೂಹದ ಒಬ್ಬ ಸದಸ್ಯರ ಬಳಿ ಬಿಎಸ್ವೈ ಬಗೆಗಿನ ಸಿಡಿ ಇದೆ: ಯತ್ನಾಳ್ ಸ್ಫೋಟಕ ಮಾಹಿತಿ! - ಬಸವರಾಜ್ ಪಾಟೀಲ್ ಯತ್ನಾಳ್
ಶಾಸಕರ ಸಮೂಹದ ಒಬ್ಬ ಸದಸ್ಯರ ಬಳಿ ಬಿ.ಎಸ್.ಯಡಿಯೂರಪ್ಪನವರ ಬಗೆಗಿನ ಸಿಡಿ ಇದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿರುವ ಅವರು, ನನ್ನನ್ನು ಮುಗಿಸಲು ಹೋಗಿ ಅವರು ಜೀರೋ ಆಗುತ್ತಿದ್ದಾರೆ. ಆಪರೇಷನ್ ಕಮಲಕ್ಕೆ ತುತ್ತಾದ ಶಾಸಕರ ಒಂದು ಸಮೂಹವಿದೆ. ಈ ತಂಡದ ಒಬ್ಬ ಸದಸ್ಯನ ಬಳಿ ಆ ಸಿಡಿ ಇದೆ. ಅದು ಯಡಿಯೂರಪ್ಪನವರದ್ದೇ ಆಗಿದೆ. ಯಾವಾಗ ಅದನ್ನು ಸದ್ಬಳಕೆ ಮಾಡಿಕೊಳ್ಳುತ್ತಾರೆ ಗೊತ್ತಿಲ್ಲ ಎಂದರು.