ಮುಪ್ಪಿನಲ್ಲೂ ಸಿಗಲಿಲ್ಲ ನೆಮ್ಮದಿಯ ನೆರಳು,ಈ ಬಡಜೀವದ ತಲೆ ಮೇಲೊಂದು ಸೂರು ಕಲ್ಪಿಸೋರು ಯಾರು? - ವೃದ್ಧಾಪ್ಯ ವೇತನವನ್ನೇ ಆಶ್ರಯಿಸಿದ್ದ ಯಲ್ಲಮ್ಮ
ಅದು ಜೀವನದಲ್ಲಿ ಸಾಕಷ್ಟು ನೊಂದು ಬೆಂದಿರುವ ಜೀವ. ಹಿಂದೆ ಮುಂದೆ ಯಾರೂ ಇಲ್ಲದ ಅನಾಥೆ. ಕಷ್ಟಾನೋ, ಸುಖಾನೋ.. ಸರ್ಕಾರ ನೀಡೋ ವೃದ್ಧಾಪ್ಯ ವೇತನವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ವೃದ್ಧೆ. ತಾನು ವಾಸವಿರುವ ಮನೆ ಬಾಡಿಗೆಯನ್ನೂ ಇದರಲ್ಲೇ ಕಟ್ಟಿ ನೆಮ್ಮದಿ ಜೀವನ ನಡೆಸ್ತಾ ಇದ್ಲು. ಆದರೆ ಮೂರು ತಿಂಗಳಿಂದ ವೃದ್ಧೆಗೆ ಬರೋ ವೃದ್ಧಾಪ್ಯದ ಹಣಾನೂ ನಿಂತು ಹೋಗಿದೆ. ಪರಿಣಾಮ ಆಕೆಯ ಪಾಡು ಏನಾಗಿದೆ ಅನ್ನೋದನ್ನು ನೀವೇ ನೋಡಿ.