ಕುಂದಗೋಳ ಉಪಸಮರ: ವೀಲ್ ಚೇರ್ನಲ್ಲಿ ಬಂದು ಮತ ಚಲಾಯಿಸಿದ ವೃದ್ಧ - undefined
ಇಂದು ಧಾರವಾಡದ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ವೃದ್ಧರು ತಮ್ಮ ಹಕ್ಕು ಚಲಾವಣೆ ಮಾಡಿದರು. ವೃದ್ಧ ಬಸವಣ್ಣೆಪ್ಪ ಮಾದ್ನೂರ್ (80) ಎಂಬುವರು ವೀಲ್ ಚೇರ್ನಲ್ಲಿ ಬಂದು ಮತ ಚಲಾಯಿಸಿದರು. ಹಾಗೆಯೇ ಯರಗುಪ್ಪಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿ ಗೌರಮ್ಮ (75) ಹಾಗೂ ಸಿದ್ದಮ್ಮ (80) ಎಂಬುವರೂ ಕೂಡ ಮತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು.