ನೈಟ್ ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸಿದ ಓಲಾ-ಉಬರ್ ಸಂಘ - ಬೆಂಗಳೂರು
ಬೆಂಗಳೂರು: ಇಂದಿನಿಂದ ರಾಜ್ಯ ಸರ್ಕಾರ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಈ ಕರ್ಫ್ಯೂಗೆ ಓಲಾ-ಉಬರ್ ಸಂಘದವರು ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ಜಾರಿಗೊಳಿಸಿರುವ ನೈಟ್ ಕರ್ಫ್ಯೂಗೆ ನಮ್ಮ ಧಿಕ್ಕಾರ. ಸರ್ಕಾರದಲ್ಲಿ ಚಿಂತನೆ ಇರಬೇಕೇ ಹೊರತು ಅವಿವೇಕತನವಲ್ಲ. ನಮಗೆ ಕ್ರಿಸ್‌ಮಸ್ ಹಾಗೂ ಹೊಸ ವರ್ಷಕ್ಕೆ ಅತಿ ಹೆಚ್ಚು ದುಡಿಮೆಯಾಗುತ್ತದೆ. ಹೀಗಿರುವಾಗ ದುಡಿದು ತಿನ್ನುವವರ ಹೊಟ್ಟೆ ಮೇಲೂ ತಣ್ಣೀರೆರಚುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ವರ್ಷದ ಆರಂಭದಿಂದಲೂ ದುಡಿಮೆ ಇಲ್ಲದಂತಾಗಿದೆ. ಈಗ ವರ್ಷದ ಅಂತ್ಯದಲ್ಲೂ ದುಡಿಮೆ ಇಲ್ಲದ ಹಾಗೆ ಮಾಡಬೇಡಿ. ಕೂಡಲೇ ನೈಟ್ ಕರ್ಫ್ಯೂ ರದ್ದು ಮಾಡಿ ಎಂದು ಓಲಾ-ಉಬರ್ ಸಂಘದ ಅಧ್ಯಕ್ಷ ತನ್ವೀರ್ ಪಾಷ ಆಗ್ರಹಿಸಿದ್ದಾರೆ.