ಯಾದಗಿರಿ, ರಾಯಚೂರು, ಕಲಬುರಗಿಗೆ ತೆರಳುತ್ತಿದ್ದ 126 ಕಾರ್ಮಿಕರನ್ನು ತಡೆದ ಅಧಿಕಾರಿಗಳು - ಚಿತ್ರದುರ್ಗ ಲೆಟೆಸ್ಟ್ ನ್ಯೂಸ್
ಕೊರೊನಾ ಸೋಂಕು ತಡೆಗೆ ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದರೂ ಲಾಕ್ಡೌನ್ ಉಲ್ಲಂಘಿಸಿ ಸ್ವಗ್ರಾಮಕ್ಕೆ ತೆರಳುತ್ತಿದ್ದ ಜನರನ್ನು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಬಳಿ ತಡೆಯಲಾಗಿದೆ. ರಾಂಪುರ ಗ್ರಾಮದ ಚೆಕ್ ಪೋಸ್ಟ್‌ನಲ್ಲಿ ನಾಲ್ಕು ವಾಹನಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಯಾದಗಿರಿ, ರಾಯಚೂರು, ಕಲಬುರಗಿಗೆ ತೆರಳುತ್ತಿದ್ದ 126 ಜನ ಕಾರ್ಮಿಕರನ್ನು ತಾಲೂಕು ಆಡಳಿತ ರಾಂಪುರದ ಶಾಲಾ ಕಟ್ಟದಲ್ಲಿರಿಸಿತ್ತು. ಇದೀಗ ಅಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಯರ್ರೇನಹಳ್ಳಿ ಹಾಸ್ಟೆಲ್‌ಗೆ ಶಿಫ್ಟ್ ಮಾಡಲು ಮುಂದಾಗಿದ್ದರಿಂದ ಹಾಸ್ಟೆಲ್‌ಗೆ ಶಿಫ್ಟ್ ಮಾಡದಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಕಾರ್ಮಿಕರನ್ನು ಶಿಫ್ಟ್ ಮಾಡುವ ವಾಹನಗಳನ್ನು ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರೆ, ಇತ್ತ ರಾಂಪುರದಲ್ಲೂ ಬೇಲಿ ಹಾಕಿ ಕಾರ್ಮಿಕರನ್ನು ಶಿಫ್ಟ್ ಮಾಡದಂತೆ ಸ್ಥಳೀಯರಿಂದ ಪ್ರತಿಭಟನೆ ನಡೆದಿದೆ. ಸದ್ಯ ನಿರಾಶ್ರಿತ ಕಾರ್ಮಿಕರಿಗೆ ಆಶ್ರಯ ಕಲ್ಪಿಸಲಾಗದೇ ತಾಲೂಕು ಆಡಳಿತ ಗೊಂದಲದಲ್ಲಿದೆ.