ಬ್ಯಾಂಕ್ನಿಂದ ನೋಟಿಸ್: ಸಾಲಬಾಧೆ ತಾಳಲಾರದೆ ನೇಣಿಗೆ ಕೊರಳೊಡ್ಡಿದ ರೈತ - ಗದಗ ನಗರದ ಕಿಲ್ಲಾ ಓಣಿ
ಸಾಲಬಾಧೆ ತಾಳಲಾರದೆ ಗದಗ ನಗರದ ಕಿಲ್ಲಾ ಓಣಿಯ ನಿವಾಸಿ ಗುರುಬಸಪ್ಪ ಎಳೆಮಲಿ (55) ಎಂಬ ರೈತ ನೇಣಿಗೆ ಶರಣಾಗಿದ್ದಾನೆ. ಗುರುಬಸಪ್ಪ ಹೊಂಬಳ ಗ್ರಾಮದಲ್ಲಿ 15 ಎಕರೆ ಹೊಲ ಹೊಂದಿದ್ದು, ಕರ್ನಾಟಕ ಬ್ಯಾಂಕ್ನಲ್ಲಿ 7 ಲಕ್ಷ ಮತ್ತು ಖಾಸಗಿ ಸಾಲ ಮಾಡಿಕೊಂಡಿದ್ದನು. ಅಲ್ಲದೇ ಕರ್ನಾಟಕ ಬ್ಯಾಂಕ್ನಿಂದ ನೋಟಿಸ್ ಸಹ ಬಂದಿತ್ತು ಎನ್ನಲಾಗಿದೆ. ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಗದಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.