ಅಹಿಂಸಾ ಮತ್ತು ಉಪವಾಸ ಸತ್ಯಾಗ್ರಹಕ್ಕಿಳಿದ ರೈತ ಸಂಘಟನೆಗಳು
ಚಿಕ್ಕಬಳ್ಳಾಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿರುವ ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ, ನಗರದ ಲೈಬ್ರರಿ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘಟನೆಯಿಂದ ಉಪವಾಸ ಸತ್ಯಾಗ್ರಹ ನಡೆಸಲಾಯಿತು. ಸರ್ಕಾರ ಮಾತ್ರ ರೈತರನ್ನು ಕಡೆಗಣಿಸಿ ರೈತರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಇದರ ಸಲುವಾಗಿಯೇ ಲೈಬ್ರರಿ ಮುಂಭಾಗ ಉಪವಾಸ ಸತ್ಯಾಗ್ರಹ ಹಾಗೂ ಅಹಿಂಸಾ ಧರಣಿಯನ್ನು ಮಾಡಲಾಗುತ್ತಿದೆ ಎಂದರು. ಗಾಂಧಿ ಜಯಂತಿಯ ದಿನದಂದು ಸತ್ಯಾಗ್ರಹ ಮಾಡುತ್ತಿರುವುದರಿಂದ ಹೋರಾಟ ನಡೆಸಿ ರೈತ ಧೋರಣೆ ಕಾಯ್ದೆಗಳನ್ನು ನಿಲ್ಲಿಸಬೇಕು. ಮುಖ್ಯಮಂತ್ರಿಗಳು ಕೇವಲ ಹೇಳಿಕೆಗೆ ಮಾತ್ರ ಸಿಮೀತವಾಗುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.