ಗೆದ್ದೋರು ನಮಗೇನು ಮಾಡ್ಯಾರ... ಏನೂ ಮಾಡದವರಿಗೆ ವೋಟ್ ಹಾಕಲ್ಲ ಎಂದ ಯುವಕ... ವಿಡಿಯೋ ವೈರಲ್ - undefined
ಚುನಾವಣೆಯಲ್ಲಿ ಗೆದ್ದು ಬಂದವರು ನಮಗೆ ಏನು ಮಾಡಿದ್ದಾರೆ? ರಸ್ತೆ ಇಲ್ಲ, ಕುಡಿಯುವ ನೀರಿಲ್ಲ, ಐದು ವರ್ಷ ಕಳೆದರೂ ಈ ಊರು ಹೇಗಿದೆ ಅಂತ ಯಾರೂ ನೋಡಿಲ್ಲ. ಮೂಲಭೂತ ಸೌಲಭ್ಯ ಕಲ್ಪಿಸದ ಜನಪ್ರತಿನಿಧಿ ಯಾರು ಬಂದರೂ ನಾವು ಮತ ಹಾಕುವುದಿಲ್ಲ ಎಂದು ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ಯುವಕನೋರ್ವ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಪ್ರಕಾಶ್ ಹುಕ್ಕೇರಿ, ರಮೇಶ್ ಕತ್ತಿ, ಡಿ.ಎಂ.ಐಹೊಳೆ, ಶಶಿಕಲಾ ಜೊಲ್ಲೆ ವಿರುದ್ಧ ಯುವಕ ಹರಿಹಾಯ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.