ಭಾರತ್ ಬಂದ್: ಮಂಡ್ಯದಲ್ಲಿ ನೋ ಬಂದ್, ಎಂದಿನಂತೆ ಜನಜೀವನ - farmers protest
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ರೈತ ಸಂಘಟನೆ ಕರೆ ನೀಡಿದ್ದ ಭಾರತ್ ಬಂದ್‌ಗೆ ಸಕ್ಕರೆ ನಾಡಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಡ್ಯ ನಗರದಲ್ಲಿ ಮಾತ್ರ ಎಂದಿನಂತೆ ಕೆಎಸ್ಆರ್ಟಿಸಿ ಬಸ್, ಆಟೋ ಸಂಚಾರ ಸಾಗಿದೆ. ನಗರದ ಅಂಗಡಿ - ಮುಂಗಟ್ಟುಗಳು, ಹೋಟೆಲ್ಗಳು ಸೇರಿದಂತೆ ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಸದ್ಯ ಮಂಡ್ಯದ ಸಂಜಯ್ ವೃತ್ತದ ಬಳಿ ಮಾನವ ಸರಪಳಿ ಮೂಲಕ ಹೆದ್ದಾರಿ ತಡೆದು ಕೆಂಪೂಗೌಡ ನೇತೃತ್ವದಲ್ಲಿ ರೈತರು ಬೆಂಗಳೂರು - ಮೈಸೂರು ರಸ್ತೆಯಲ್ಲಿ ಸ್ವಯಂ ಪ್ರೇರಿತವಾಗಿ ರಸ್ತೆಗಿಳಿದು, ರೈತ ಹೋರಾಟಕ್ಕೆ ಬೆಂಬಲ ನೀಡದ ಸಂಘಟನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾಗಿದ್ದ ರೈತರನ್ನು ಪೊಲೀಸರು ಮನವೊಲಿಸಿ ಪ್ರತಿಭಟನೆಯನ್ನ ನಿಲ್ಲಿಸಿದರು.