5.0 ಲಾಕ್ ಡೌನ್ ಘೋಷಣೆ ನಿಯಮ ಪಾಲಿಸದ ದುರ್ಗದ ಜನರು! - ಚಿತ್ರದುರ್ಗದಲ್ಲಿ ಸಾಮಾಜಿಕ ಅಂತರ ಇಲ್ಲ ಸುದ್ದಿ,
ದೇಶದಲ್ಲಿ 5.0 ಲಾಕ್ಡೌನ್ ಘೋಷಣೆಯಾಗಿದ್ದರೂ ಅದು ಚಿತ್ರದುರ್ಗದ ಮಂದಿಗೆ ಅನ್ವಯಿಸುವುದಿಲ್ಲವೇ ಎಂಬ ಅನುಮಾನ ಕಾಡತೊಡಗಿದೆ. ಜನ್ -ಧನ್ ಖಾತೆಗಳಿಗೆ ಪ್ರಧಾನಿ ಮೋದಿಯವರು ಐದು ನೂರು ರೂಪಾಯಿ ಹಾಕಿದ್ದಾರೆ ಎಂದು ತಿಳಿದಿದ್ದೆ ತಡ ಜನರು ಸಾಮಾಜಿಕ ಅಂತರ ಕಾಪಾಡದೇ ಕೆನರಾ ಬ್ಯಾಂಕ್ ಬಳಿ ಜಮಾಯಿಸಿದರು. ಇದರಿಂದ ಕೆನರಾ ಬ್ಯಾಂಕ್ ಸಿಬ್ಬಂದಿಗೆ ತಲೆಬಿಸಿಯಾಗಿ ಪರಿಣಮಿಸಿತು. ಚಿತ್ರದುರ್ಗದಲ್ಲಿ ಒಟ್ಟು 39 ಕೊರೊನಾ ಪ್ರಕರಣಗಳು ಪತ್ತೆಯಾದರೂ ಜನರು ಮಾತ್ರ ಸಾಮಾಜಿಕ ಅಂತರ ಕಾಪಾಡದೇ ಓಡಾಡುತ್ತಿದ್ದಾರೆ. ಈ ಬಗೆಗಿನ ವರದಿ ಇಲ್ಲಿದೆ.