ಕೇಳೋಱರು ನೆರೆ ಸಂತ್ರಸ್ತರ ಗೋಳು: ಸೂರಿಲ್ಲದೆ ನಿತ್ಯವೂ ನರಕ - No shelter for people
ಹಾವೇರಿ ಜಿಲ್ಲೆಯ ನೆರೆ ಸಂತ್ರಸ್ತರ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಜಿಲ್ಲೆಯಲ್ಲಿ ನೆರೆ ಸಂತ್ರಸ್ತರು ಅಕ್ಷರಶಃ ಆತಂಕದಲ್ಲಿದ್ದಾರೆ. ಒಂದೊಂದು ನೆರೆಪೀಡಿತ ಗ್ರಾಮದ್ದು ಒಂದೊಂದು ಕಥೆ. ಕೆಲ ನೆರೆ ಸಂತ್ರಸ್ತರಿಗೆ ಹಣ ಬಿಡುಗಡೆಯಾಗಿಲ್ಲ. ಕೆಲ ಸಂತ್ರಸ್ತರಿಗೆ ಹಣ ಬಿಡುಗಡೆಯಾಗಿದೆ. ಆದರೆ, ಮನೆ ಕಟ್ಟಿಕೊಳ್ಳಲು ಜಾಗವಿಲ್ಲ. ಕೆಲ ಸಂತ್ರಸ್ತರಿಗೆ ಈ ಹಿಂದೆ ಮುಳುಗಡೆಯಾದ ಪ್ರದೇಶದಲ್ಲಿ ಮನೆಕಟ್ಟಿಕೊಳ್ಳುವಂತೆ ತಿಳಿಸಲಾಗಿದೆ. ಈ ಬಗ್ಗೆ ವರದಿ ಇಲ್ಲಿದೆ.