ಕದಂಬರ ನಾಡಿಗೆ ಪ್ರವಾಸಿಗರ ದಂಡು... ಸಮುದ್ರ ತೀರದಲ್ಲಿಲ್ಲ ಯಾವುದೇ ಸುರಕ್ಷತೆ - ಉತ್ತರ ಕನ್ನಡದಲ್ಲಿ ಪ್ರವಾಸೋಧ್ಯಮ ಚೇತರಿಕೆ
ಕಾರವಾರ: ಕೊರೊನಾ ಅನ್‌ಲಾಕ್ 4.0 ಜಾರಿಯಾದ ಬೆನ್ನಲ್ಲೇ ರಾಜ್ಯದ ಕರಾವಳಿಯತ್ತ ಪ್ರವಾಸಿಗರ ದಂಡು ಹರಿದು ಬರಲು ಪ್ರಾರಂಭವಾಗಿದೆ. ಅದರಲ್ಲೂ ವಿಶಾಲವಾದ ಕಡಲತೀರವನ್ನು ಹೊಂದಿರುವ ಉತ್ತರಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದೆ. ಆದ್ರೆ, ಕಡಲತೀರಗಳಲ್ಲಿ ಮೊದಲಿದ್ದಂತೆ ಯಾವುದೇ ಸುರಕ್ಷತೆ ಇಲ್ಲದಿರುವುದು ಪ್ರವಾಸಿಗರ ಪ್ರಾಣಕ್ಕೆ ಕಂಟಕವಾಗುತ್ತಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.