ಹೊಸಪೇಟೆಯಲ್ಲಿ ಸಹಜ ಸ್ಥಿತಿಯ ಮಧ್ಯೆ ಪ್ರತಿಭಟಿಸಿದ ಕನ್ನಡ ಹೋರಾಟಗಾರರು- ಪ್ರತ್ಯಕ್ಷ ವರದಿ - no resposnse from hospet for karnataka band
ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ಗೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಎಂದಿನಂತೆ ಜನ ಜೀವನ ನಡೆಯುತ್ತಿದೆ. ನಗರದ ಹೃದಯಭಾಗದಲ್ಲಿ ರೋಟರಿ ವೃತ್ತದಲ್ಲಿ ಅಂಗಡಿ-ಮುಂಗಟ್ಟುಗಳು ವ್ಯಾಪಾರ, ವಹಿವಾಟು ನಡೆಸುತ್ತಿವೆ. ಬಸ್, ಆಟೋ ಸೇರಿ ವಾಹನ ಸಂಚಾರ ಸಹಜವಾಗಿದೆ. ಅಂಬೇಡ್ಕರ್ ವೃತ್ತ, ಪುಣ್ಯಮೂರ್ತಿ, ವಾಲ್ಮೀಕಿ ವೃತ್ತ, ಮೂರಂಗಡಿ ವೃತ್ತ ಸೇರಿ ಬಹುತೇಕ ಕಡೆ ಅಂಗಡಿ-ಮುಂಗಟ್ಟುಗಳು ತೆರೆದಿವೆ.