ಕರ್ನಾಟಕ

karnataka

ETV Bharat / videos

ಕೊರೊನಾ ಕರ್ಮ....500 ರೂ. ನೋಟು ಕಂಡು ಭಯಭೀತರಾದ ಮಂಡ್ಯ ಜನತೆ - 500 rs note on road

By

Published : Apr 22, 2020, 2:28 PM IST

ಐದು ರೂಪಾಯಿ ನಾಣ್ಯ ರಸ್ತೆಯಲ್ಲಿ ಬಿದ್ದಿದ್ದರೆ ಬಿಡದ ಜನರೀಗ ಐದುನೂರು ರೂಪಾಯಿ ಕಂಡು ಹೆದರುವ ಕಾಲ ಬಂದಿದೆ. ಹೌದು, ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಗಾಣಿಗರ ರಸ್ತೆಯಲ್ಲಿ 500 ರೂಪಾಯಿ ಮುಖಬೆಲೆಯ 6 ನೋಟುಗಳು ಬಿದ್ದಿದ್ದರೂ ಕೂಡಾ ಜನರು ಅದನ್ನು ತಗೆದುಕೊಳ್ಳದೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ ಘಟನೆ ನಡೆದಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ನೋಟಿನ ಮೇಲೆ ಸ್ಯಾನಿಟೈಜರ್ ಸಿಂಪಡಿಸಿ, ಗ್ಲೌಸ್ ಧರಿಸಿ ನೋಟು ಎತ್ತಿಕೊಂಡರು. ಹಣ ಕಳೆದುಕೊಂಡವರು ಯಾರಾದರೂ ಇದ್ದರೆ ಠಾಣೆಗೆ ಬಂದು ಪಡೆಯಲು ಸೂಚನೆ ನೀಡಲಾಗಿದೆ.

ABOUT THE AUTHOR

...view details