ರೂಪಾಂತರಗೊಂಡ ವೈರಸ್ ಬಗ್ಗೆ ಭಯ ಬೀಳುವ ಅವಶ್ಯಕತೆಯಿಲ್ಲ: ಸಿ.ಟಿ.ರವಿ - CT Ravi's statement on the mutated corona virus
ಕೊರೊನಾ ವೈರಸ್ ತಡೆಗಟ್ಟಲು ಇಂದಿನಿಂದ ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ ಜಾರಿಗೆ ತಂದಿರುವ ಕುರಿತು ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಈ ವೈರಸ್ ಬಗ್ಗೆ ಹೆಚ್ಚಿನ ಆತಂಕ ಬೇಡ ಎಂದು ನನಗೆ ಅನಿಸುತ್ತಿದೆ. ಈಗಾಗಲೇ ತಜ್ಞರು ಹೇಳಿರುವಂತೆ ಇಲ್ಲಿಗೆ ಅದು ಬಹಳ ಹಾನಿ ಮಾಡೋದಿಲ್ಲ. ರೂಪಾಂತರಗೊಂಡ ವೈರಸ್ಗೆ ಈಗಿರುವ ಚಿಕಿತ್ಸೆಯನ್ನೇ ನೀಡಬಹುದು ಎಂಬ ಮಾತನ್ನು ಹೇಳಿದ್ದಾರೆ. ಆದರೆ ಅದರ ಬಗ್ಗೆ ಎಚ್ಚರ ಮಾತ್ರ ವಹಿಸಲೇಬೇಕು. ಮಾಸ್ಕ್ ಧರಿಸೋದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಹಾಗಂತ ತೀರಾ ಭಯ ಬೀಳುವ ಅವಶ್ಯಕತೆ ಇಲ್ಲ ಎಂದರು.