ಇಡೀ ರಾಜ್ಯವೇ ಲಾಕ್ಡೌನ್: ಜಿಂದಾಲ್, ಕೆಪಿಟಿಸಿಎಲ್, ಶಾತವಾಹನ ಕೈಗಾರಿಕೆ ಸಿಬ್ಬಂದಿಗೆ ಇಲ್ವಾ ಲಾಕ್!? - karnataka lockdown news
ಗಣಿನಾಡು ಬಳ್ಳಾರಿ ಜಿಲ್ಲೆಯ ಶಾತವಾಹನ, ಜಿಂದಾಲ್, ಕೆಪಿಟಿಸಿಎಲ್ ಇನ್ನಿತರ ಕೈಗಾರಿಗಳಿಗೆ ಕಾರ್ಮಿಕರು ಎಂದಿನಂತೆ ಕೆಲಸಕ್ಕೆ ಬಸ್ಗಳ ಮೂಲಕ ಗುಂಪು ಗುಂಪಾಗಿ ಪ್ರಯಾಣ ಮಾಡುತ್ತಿದ್ದಾರೆ. ಬಳ್ಳಾರಿ ಮತ್ತು ಹೊಸಪೇಟೆ ನಗರದಿಂದ ಜಿಲ್ಲೆಯಲ್ಲಿನ ವಿವಿಧ ಕೈಗಾರಿಕೆಗಳಿಗೆ 34 ಬಸ್ಗಳು ಇವೆ. ಕೊರೊನಾ ವೈರಸ್ ಮುಂಜಾಗ್ರತೆ ದೃಷ್ಟಿಯಿಂದ ಕರ್ನಾಟಕ ರಾಜ್ಯವೇ ಲಾಕ್ಡೌನ್ ಆಗಿದ್ರೂ ಬಳ್ಳಾರಿ ಜಿಲ್ಲೆಯ ಕೈಗಾರಿಕೆ ಸಿಬ್ಬಂದಿಗೆ ಲಾಕ್ ಡೌನ್ ಇಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ನಗರದ ಸುತ್ತಮುತ್ತಲಿನಲ್ಲಿರುವ ವಿವಿಧ ಕೈಗಾರಿಕೆಗಳು ಅಧಿಕಾರಿಗಳು, ಕಾರ್ಮಿಕರು, ಸಿಬ್ಬಂದಿ ಎಂದಿನಂತೆ ಕೆಲಸಕ್ಕೆ ಸಿದ್ಧರಾಗಿ ರಸ್ತೆಯಲ್ಲಿ ಕಾಯುತ್ತಾ ನಿಂತಿದ್ದ ದೃಶ್ಯಗಳು ಕಂಡುಬಂತು. ಈಟಿವಿ ಭಾರತ ವರದಿಗಾರರು ಕ್ಯಾಮರಾ ಆನ್ ಮಾಡಿದ ಕೂಡಲೇ ಜಿಂದಾಲ್ ಬಸ್ ಕಾರ್ಮಿಕರನ್ನು ಬಸ್ನಲ್ಲಿ ಹತ್ತಿಸಿಕೊಳ್ಳದೇ ಹಾಗೆ ಮುಂದಕ್ಕೆ ಹೋಗಿದೆ. ಕೆಲವರು ಅಲ್ಲೇ ನಿಂತರೆ ಇನ್ನು ಕೆಲವರು ತಮ್ಮ ಬೈಕ್ ಹಾಗೂ ಕಾರುಗಳಲ್ಲಿ ಜಿಂದಾಲ್ ಇನ್ನಿತರ ಕೈಗಾರಿಕೆಗಳತ್ತ ಪಯಣ ಮಾಡಿದರು.