ಲಾಕ್ಡೌನ್ ಮುಗಿಯುವರೆಗೂ ಮದ್ಯ ಮಾರಾಟ ಬೇಡ: ಎಂ. ಬಿ. ಪಾಟೀಲ್ - ಕೋವಿಡ್-19
ವಿಜಯಪುರ: ಕೊರೂನಾ ಭೀಕರತೆ ನಡುವೆ ಮದ್ಯದ ಅಂಗಡಿಗಳನ್ನು ಆರಂಭಿಸಬೇಕೆಂಬ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಚಿವ ಎಂ.ಬಿ. ಪಾಟೀಲ್ ಯಾವುದೇ ಕಾರಣಕ್ಕೂ ಲಾಕ್ ಡೌನ್ ಮುಗಿಯುವವರೆಗೆ ಮದ್ಯ ಮಾರಾಟ ಬೇಡ ಎಂದಿದ್ದಾರೆ. ಸಾರಾಯಿ ಸಿಗದೆ ಮಾನಸಿಕ ಅಸ್ವಸ್ಥನಾಗುವ ವ್ಯಕ್ತಿ ತಾನು ಮಾತ್ರ ತೊಂದರೆಗೆ ಒಳಗಾಗಬಹುದು. ಆದರೆ ಆತ ಕುಡಿದರೆ ಇನ್ನೂ ಇನ್ನೂ ಹೆಚ್ಚಿನ ಜನರನ್ನು ತೊಂದರೆಗೆ ದೂಡುತ್ತಾನೆ. ಆದ್ದರಿಂದ ಯಾವುದೇ ಕಾರಣಕ್ಕೂ ಸಾರಾಯಿ ಮಾರಾಟ ಬೇಡವೆಂದು ಸರ್ಕಾರಕ್ಕೆ ಎಂ ಬಿ ಪಾಟೀಲ್ ಒತ್ತಾಯಿಸಿದ್ದಾರೆ.