ಡಿಜೆನೂ ಇಲ್ಲ, ಡ್ಯಾನ್ಸೂ ಇಲ್ಲ: ಕುಂದಾನಗರಿಯಲ್ಲಿ ಕುಂದಿದ ಹೊಸವರ್ಷದ ಸಂಭ್ರಮಾಚರಣೆ - ಕುಂದಾನಗರಿ ಬೆಳಗಾವಿ
ಬೆಳಗಾವಿ: ಕೋವಿಡ್ ಹಿನ್ನೆಲೆ ಕುಂದಾನಗರಿ ಬೆಳಗಾವಿಯಲ್ಲಿ ಹೊಸವರ್ಷ ಸ್ವಾಗತದ ಸಂಭ್ರಮ ಕಳೆಗುಂದಿದೆ. ಹೊಸವರ್ಷದ ಸಂಭ್ರಮಕ್ಕೆ ಸಾಕ್ಷಿ ಆಗುತ್ತಿದ್ದ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಸಂಭ್ರಮಕ್ಕೆ ಇಂಬು ನೀಡುವ ಯಾವುದೇ ವ್ಯವಸ್ಥೆ ಮಾಡಿಲ್ಲ. ಡಿಜೆ ಅಳವಡಿಕೆ ಹಾಗೂ ಸಾಮೂಹಿಕ ನೃತ್ಯಕ್ಕೆ ಬ್ರೇಕ್ ಹಾಕಲಾಗಿದ್ದು, ಖಾಯಂ ಗ್ರಾಹಕರಿಗೆ ಎಲ್ಲ ಹೋಟೆಲ್ ಗಳಲ್ಲಿ ಕೇವಲ ಊಟದ ವ್ಯವಸ್ಥೆ ಮಾಡಲಾಗಿದೆ.