ನೆರೆ ಪರಿಹಾರದ ವಿಷಯದಲ್ಲಿ ಯಾವುದೇ ತಾರತಮ್ಯವಾಗಿಲ್ಲ: ಸುರೇಶ್ ಅಂಗಡಿ
ಹುಬ್ಬಳ್ಳಿ: ನೆರೆ ಸಂತ್ರಸ್ತರಿಗೆ ಪರಿಹಾರದ ವಿಷಯದಲ್ಲಿ ಯಾವುದೇ ತಾರತಮ್ಯವಾಗಿಲ್ಲ. ಈಗಾಗಲೇ ಸರ್ಕಾರ ಪರಿಹಾರ ನೀಡುತ್ತಿದೆ. ಮನೆ ಮಠ ಕಳೆದುಕೊಂಡವರಿಗೆ 10 ಸಾವಿರ ರೂ. ನೀಡುತ್ತಿದ್ದೇವೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು. ನಗರದಲ್ಲಿ ಬೈಪಾಸ್ ರೈಲ್ವೆ ಮಾರ್ಗ ಲೋಕಾರ್ಪಣೆಗೊಳಿಸಿ ನಂತರ ಮಾತನಾಡಿದ ಅವರು, ಕೇಂದ್ರ ಕೂಡ ಪರಿಹಾರ ನೀಡುತ್ತೆ ಎಂದು ಭರವಸೆ ನೀಡಿದ್ರು. ಈ ಹಿಂದೆ ಕಾಂಗ್ರೆಸ್ 200-300 ರೂ. ನೀಡುತ್ತಿತ್ತು. ಆದ್ರೆ ನಮ್ಮ ಯಡಿಯೂರಪ್ಪನವರ ಸರ್ಕಾರ 10 ಸಾವಿರ ರೂಪಾಯಿ ಕೊಡುತ್ತಿದೆ ಎಂದರು.