ಕರ್ನಾಟಕ

karnataka

ETV Bharat / videos

ತುಂಗಭದ್ರಾ ಜಲಾಶಯ ಬಿರುಕು ಬಿಟ್ಟಿಲ್ಲ... ಗಾಳಿ ಸುದ್ದಿ ನಂಬದಂತೆ ಮೈಕ್​ ಮೂಲಕ ಪೊಲೀಸರ ಮನವಿ! - ಕೊಪ್ಪಳ

By

Published : Aug 13, 2019, 1:38 PM IST

Updated : Aug 13, 2019, 1:59 PM IST

ಕೊಪ್ಪಳ: ಮುನಿರಾಬಾದ್​ನಲ್ಲಿರುವ ತುಂಗಭದ್ರಾ ಜಲಾಶಯದ ಮೇಲ್ಮಟ್ಟದ ಕಾಲುವೆಯ ಕಬ್ಬಿಣದ ಪ್ಲೇಟ್ ಬೆಂಡಾಗಿ ಅಪಾರ ಪ್ರಮಾಣದ ನೀರು ಹರಿದಿದೆ. ಇದೇ ವಿಷಯವೀಗ ಗ್ರಾಮೀಣ ಪ್ರದೇಶದಲ್ಲಿ, ನದಿ ಪಾತ್ರದ ಗ್ರಾಮಗಳಲ್ಲಿ ಜಲಾಶಯ ಬಿರುಕು ಬಿಟ್ಟಿದೆ ಎಂಬುದಾಗಿ ಗಾಳಿ ಸುದ್ದಿ ಹರಡಿದೆ. ಜಲಾಶಯ ಬಿರುಕು ಬಿಟ್ಟಿದೆ ಎಂಬ ಸುಳ್ಳು ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಪೊಲೀಸರು ಜನರಿಗೆ ಮೈಕ್​ ಮೂಲಕ ಅನೌನ್ಸ್​ ಮಾಡುತ್ತಿದ್ದಾರೆ. ಯಾರೂ ಸಹ ಗಾಳಿ ಸುದ್ದಿಯನ್ನು ನಂಬಬೇಡಿ. ಯಾವುದೇ ಅಪಾಯವಿಲ್ಲ. ಸಾರ್ವಜನಿಕರು ಭಯ, ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ತುಂಗಭದ್ರಾ ನದಿ ಪಾತ್ರದ ಗ್ರಾಮಗಳಲ್ಲಿ ಪೊಲೀಸರು ಮೈಕ್ ಮೂಲಕ ಅನೌನ್ಸ್‌ ಮಾಡುತ್ತಿದ್ದಾರೆ.
Last Updated : Aug 13, 2019, 1:59 PM IST

ABOUT THE AUTHOR

...view details