ಕೊರೊನಾದಿಂದ ಹಾಸನ ಜಿಲ್ಲೆ ಸೇಫ್: 8 ಜನರ ವರದಿ ನೆಗಟಿವ್ - ಕೊರೊನಾ ವೈರಸ್
ಹಾಸನ: ಮಂಡ್ಯದ ನಾಗಮಂಗಲ ತಾಲೂಕಿನ ಡಿಸಾತೇನಹಳ್ಳಿ ಗ್ರಾಮದ ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 8 ಜನರ ವರದಿ ನೆಗೆಟಿವ್ ಬಂದಿದ್ದು, ಜಿಲ್ಲಾಡಳಿತ ಹಾಗೂ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಗ್ರೀನ್ ಝೋನ್ ಜಿಲ್ಲೆ ಹಾಸನಕ್ಕೂ ಕೊರೊನಾ ವಕ್ಕರಿಸೋ ಆತಂಕ ಮನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬರೋಬ್ಬರಿ 22 ಗಂಟೆ ಸೋಂಕಿತನ ಜೊತೆಯಲ್ಲಿ ಇದ್ದವರನ್ನು ಪರೀಕ್ಷೆಗೊಳಪಡಿಸಿದಾಗ ಎಲ್ಲರ ವರದಿ ನೆಗೆಟಿವ್ ಬಂದಿದೆ. ವರದಿ ನೆಗೆಟಿವ್ ಬಂದರೂ ಎಲ್ಲರನ್ನೂ ಕ್ವಾರಂಟೈನ್ ಮಾಡಿರುವ ಜಿಲ್ಲಾಡಳಿತ, ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದೆ. ಜಿಲ್ಲೆಯ ಗಡಿಭಾಗ ಸಂಪೂರ್ಣ ಬಂದ್ಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Last Updated : Apr 28, 2020, 3:05 PM IST