ಮಲೆನಾಡ ಜಿಲ್ಲೆಯಲ್ಲಿಲ್ಲ ಬಂದ್ ಬಿಸಿ: ಜನ ಜೀವನ ಎಂದಿನಂತೆ - chickmagaluru
ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ವಿವಿಧ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್ ಕರೆಗೆ ಚಿಕ್ಕಮಗಳೂರಿನಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತ ಆಗುತ್ತಿಲ್ಲ. ಕರ್ನಾಟಕ ಬಂದ್ಗೆ ಯಾವುದೇ ಸಂಘಟನೆ ಬೆಂಬಲ ಘೋಷಿಸಿಲ್ಲ, ಜೊತೆಗೆ ಶಾಲಾ ಕಾಲೇಜುಗಳಿಗೆ ಯಾವುದೇ ರಜೆ ಇಲ್ಲ. ಕೆಎಸ್ಆರ್ಟಿಸಿ ಬಸ್, ಖಾಸಗಿ ಬಸ್, ಆಟೋ, ಟ್ಯಾಕ್ಸಿ ಸೇರಿದಂತೆ ಎಲ್ಲವೂ ಎಂದಿನಂತೆ ಸಂಚಾರ ನಡೆಸುತ್ತಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಂದಿನಂತೆ ಜನ ಜೀವನ ಕಂಡು ಬರುತ್ತಿರುವ ಕುರಿತು ನಮ್ಮ ಪ್ರತಿನಿಧಿ ನೀಡಿರುವ ವರದಿ ಇಲ್ಲಿದೆ.