ಕ್ಯೂನಲ್ಲಿ ನಿಂತು ಕೃಷ್ಣನ ದರ್ಶನ ಮಾಡಿದ ಕೇಂದ್ರ ರಕ್ಷಣಾ ಸಚಿವೆ..! - Nirmala sitharaman
ಉಡುಪಿಯ ಕೃಷ್ಣ ಮಠಕ್ಕೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಭೇಟಿ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಕನಕನ ಕಿಂಡಿಯ ಮೂಲಕ ಭಕ್ತನೊಬ್ಬ ಕೃಷ್ಣನ ದರ್ಶನ ಮಾಡುತ್ತಿದ್ದನು. ಅಲ್ಲಿದ್ದ ಸಿಬ್ಬಂದಿ ಆ ಭಕ್ತನನ್ನ ಪಕ್ಕಕ್ಕೆ ಕಳಿಸುತ್ತಿರುವುದನ್ನು ಕಂಡ ನಿರ್ಮಲಾ ಸೀತಾರಾಮನ್, ಪೊಲೀಸರನ್ನು ತಡೆದು ಆ ಭಕ್ತನ ದರ್ಶನಕ್ಕೆ ಅಡ್ಡಿಪಡಿಸದಂತೆ ಸೂಚಿಸಿ ಸೌಜನ್ಯ ಮೆರೆದರು. ಅನಂತರ ನಿರ್ಮಲಾ ಸೀತಾರಾಮನ್ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಕೈಗೊಂಡಿದ್ದು ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.