'ನಿರ್ಭಯ'ವಾದ ಹೋರಾಟಕ್ಕೆ ಸಂದ ಜಯ: ಚಿತ್ರದುರ್ಗದಲ್ಲಿ ಸಂಭ್ರಮ - nirbhaya case
ಚಿತ್ರದುರ್ಗ: ಭಯ ಮರೆತು ಕ್ರೂರ ಮೃಗಗಳಂತೆ ಹೆಣ್ಣಿನ ಮೇಲೆ ಹತ್ಯಾಚಾರ ನಡೆಸಿದ್ದ ಪಾಪಿಗಳ ಕತ್ತಿಗೆ ಕುಣಿಕೆ ಹಾಕಲಾಗಿದೆ. ಹಲವಾರು ವರ್ಷಗಳ 'ನಿರ್ಭಯ'ವಾದ ಹೋರಾಟಕ್ಕೆ ಕೊನೆಗೂ ಜಯ ಲಭಿಸಿದ ಹಿನ್ನೆಲೆ ನಗರದ ಐಯುಡಿಪಿ ಬಡಾವಣೆಯಲ್ಲಿ ಮಹಿಳಾ ಹೋರಾಟಗಾರ್ತಿ ರಮಾ ನಾಗರಾಜ್ ಹಾಗೂ ಕೆಲ ಮಹಿಳೆಯರು ಸೇರಿ ಸಿಹಿ ಹಂಚುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.