ನೀರಾ, ಕ್ಯಾಸಿನೋ ಬಗ್ಗೆ ಕ್ಯಾಬಿನೆಟ್ ಚರ್ಚೆಗೆ ಬಂದಿಲ್ಲ.. ಸಚಿವ ಶೆಟ್ಟರ್!
ನೀರಾ ಹಾಗೂ ಕ್ಯಾಸಿನೋ ಬಗ್ಗೆ ನಮ್ಮ ಬಳಿ ಚರ್ಚೆಗೆ ಬಂದಿಲ್ಲ. ಅದು ಸರ್ಕಾರದ ನಿರ್ಧಾರವೂ ಅಲ್ಲ. ಯಾರೋ ಮನವಿ ಕೊಟ್ಟಿರುತ್ತಾರೆ. ಆದರೆ, ಅದು ಪಾಲಿಸಿ ಡಿಷಿಶನ್ ಅಲ್ಲ ಎಂದು ಧಾರವಾಡದಲ್ಲಿ ಸಚಿವ ಜಗದೀಶ್ ಶಟ್ಟರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕ್ಯಾಬಿನೆಟ್ನಲ್ಲಿ ಈ ಬಗ್ಗೆ ಚರ್ಚೆಗೆ ಬಂದಿಲ್ಲವೆಂದರು. ಇನ್ನು ಶಾಸಕ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ರಮೇಶ್ ಜಾರಕಿಹೋಳಿ ಒತ್ತಾಯ ಇದೆ. ಅವರು ಬೇರೆ ಕಡೆಯಿಂದ ಅವರನ್ನ ಕರೆ ತಂದವರು. ಇದರಲ್ಲಿ ಯಾವುದೇ ಬ್ಲಾಕ್ಮೇಲ್ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪಾಕ್ಪರ ಘೋಷಣೆ ಕುರಿತು ಪ್ರತಿಕ್ರಿಯಿಸಿ, ಕೇವಲ ವೋಟ್ ಬ್ಯಾಂಕ್ಗಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡುತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.