ಅಂಧ ಮಕ್ಕಳನ್ನು ಭೇಟಿ ಮಾಡಿ ಧೈರ್ಯ ತುಂಬಿದ್ರು ನಿಖಿಲ್ ಕುಮಾರಸ್ವಾಮಿ - karnataka flood
ಪ್ರವಾಹ ಸಂತ್ರಸ್ತ ಅಂಧ ಮಕ್ಕಳನ್ನು ಧಾರವಾಡದಲ್ಲಿ ನಟ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ಮಾಡಿ ಅಂಧ ಮಕ್ಕಳಿಗೆ ಧೈರ್ಯ ತುಂಬಿದರು. ಗದಗ ಜಿಲ್ಲೆಯ ಹೊಳೆ ಆಲೂರಿನ ಜ್ಞಾನ ಸಿಂಧು ಅಂಧ ಮಕ್ಕಳ ವಸತಿ ಶಾಲೆಯ 70 ಮಕ್ಕಳು ಪ್ರವಾಹ ಎದುರಾದ ಕಾರಣ ಧಾರವಾಡ ಚೈತನ್ಯ ಕಲ್ಯಾಣ ಮಂಪಟದಲ್ಲಿ ಆಶ್ರಯ ಪಡೆದಿದ್ದಾರೆ. ಹೊಳೆ ಆಲೂರಿನಲ್ಲಿ ಪ್ರವಾಹ ಬಂದ ಹಿನ್ನೆಲೆ ಧಾರವಾಡಕ್ಕೆ ಅಂಧ ಮಕ್ಕಳು ಸ್ಥಳಾಂತರಗೊಂಡಿದ್ದಾರೆ.