ಕುರುಕ್ಷೇತ್ರ ಚಿತ್ರದ ಸಂಭಾವನೆ ನೆರೆ ಸಂತ್ರಸ್ತರಿಗೆ: ನಿಖಿಲ್ ಕುಮಾರಸ್ವಾಮಿ - ಕುರುಕ್ಷೇತ್ರ ಚಿತ್ರ.
ಕುರುಕ್ಷೇತ್ರ ಚಿತ್ರದಿಂದ ಬರುವ ಸಂಭಾವನೆಯನ್ನು ನೆರೆ ಪರಿಹಾರಕ್ಕೆ ನೀಡುವುದಾಗಿ ನಟ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪ್ರವಾಹಕ್ಕೆ ಉತ್ತರ ಕರ್ನಾಟಕದ ಜನರು ತತ್ತರಿಸಿ ಹೋಗಿದ್ದಾರೆ. ಈ ಸಮಯದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ನಾನು ಇವತ್ತು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ. ನಮ್ಮ ಪಕ್ಷದಿಂದ ಜನರಿಗೆ ಕೈಲಾದಷ್ಟು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.