ಶಿರಾ ಉಪ ಕದನ; ಜೆಡಿಎಸ್ ಅಭ್ಯರ್ಥಿ ಪರವಾಗಿ ನಿಖಿಲ್ ಕುಮಾರಸ್ವಾಮಿ ಅಬ್ಬರದ ಪ್ರಚಾರ - Sira assembly constituency
ತುಮಕೂರು: ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪರವಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇಂದು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಬೋರಸಂದ್ರ ಗ್ರಾಮದಿಂದ ಆರಂಭವಾದ ರ್‍ಯಾಲಿ 30 ಗ್ರಾಮಗಳಲ್ಲಿ ಸಾಗಿತು. ಸ್ಥಳೀಯ ಜೆಡಿಎಸ್ ಮುಖಂಡರು ಹಾಗೂ ಮಧುಗಿರಿ ಶಾಸಕ ವೀರಭದ್ರಪ್ಪ ನಿಖಿಲ್ಗೆ ಸಾಥ್ ನೀಡಿದರು.