ಶಿರಾ ಕದನ ಕಣದಲ್ಲಿ ನಿಖಿಲ್ ಕುಮಾರಸ್ವಾಮಿ ಭರ್ಜರಿ ಮತಬೇಟೆ - ಶಿರಾ ಕಣದಲ್ಲಿ ನಿಖಿಲ್ ಕುಮಾರಸ್ವಾಮಿ ಭರ್ಜರಿ ಮತಬೇಟೆ
ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪರವಾಗಿ ನಿಖಿಲ್ ಕುಮಾರಸ್ವಾಮಿ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಇಲ್ಲಿನ ದಾಸರಹಳ್ಳಿ, ಮದಲೂರು, ಇನಕನಹಳ್ಳಿ, ಬಪ್ಪನಾಡು, ಹುಲಿಗೇರಿ, ಗೊಲ್ಲರಹಟ್ಟಿ, ಹುಳಿಗೆರೆ, ತಿಮ್ಮಸಾಗರ, ಗಿಡಗನಹಳ್ಳಿ, ಕೆಂತಾರ್ಲ ಹಟ್ಟಿ ಗ್ರಾಮಗಳಲ್ಲಿ ಮತಯಾಚಿಸಿದರು. ಈ ವೇಳೆ ನಿಖಿಲ್ಗೆ ತಾಲೂಕು ಜೆಡಿಎಸ್ ಅಧ್ಯಕ್ಷ ಉಗ್ರಪ್ಪ ಸಾಥ್ ನೀಡಿದ್ದಾರೆ.